ಕುರುಗೋಡು ಪುರಸಭೆಗೆ ನೂತನ ಮುಖ್ಯಾಧಿಕಾರಿಯಾಗಿ ಪರುಶುರಾಮ ಅಧಿಕಾರ ಸ್ವೀಕಾರ

ಸಿರಿನಾಡ ಸುದ್ದಿ, ಕುರುಗೋಡು: ತಾಲೂಕಿನ ಪುರಸಭೆ ಅಧಿಕಾರಿ ಎಚ್. ಫಿರೋಜ್ ಖಾನ್ ವರ್ಗಾವಣೆ ಹಿನ್ನಲೆ ಅವರ ಸ್ಥಾನಕ್ಕೆ ನೂತನ ಅಧಿಕಾರಿಯಾಗಿ ಪರುಶುರಾಮ ಶನಿವಾರ ಅಧಿಕಾರ ಸ್ವೀಕಾರಿಸಿದರು.
ನಂತರ ಮಾತನಾಡಿದ ಅವರು, ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸರ್ವ ಸದಸ್ಯರನ್ನು ಒಗ್ಗೂಡಿ ಪಟ್ಟಣದ ಅಭಿವೃದ್ಧಿಗೆ ಗಮನ ಹರಿಸಲಾಗುವುದು. ಪಟ್ಟಣದಲ್ಲಿ ಕುಡಿವ ನೀರು, ಸ್ವಚ್ಛತೆ, ರಸ್ತೆ ಅಭಿವೃದ್ಧಿ, ಬೀದಿ ದೀಪಾ ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ನೂತನ ಅಧಿಕಾರಿಗಳಿಗೆ ನಾನಾ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಸ್ವಾಗತಿಸಿದರು.