ಕುರುಗೋಡಿನಲ್ಲಿ ಭಾರತಬಂದ್ ಬೆಂಬಲಿಸಿ, ಕಾರ್ಮಿಕ ಸಂಘಟನೆಗಳ ನೇತ್ರುತ್ವದಲ್ಲಿ ಪ್ರತಿಭಟನಾ ಮೆರವಣಿಗೆ

ಸಿರಿನಾಡ ಸುದ್ದಿ, ಕುರುಗೋಡು:. ಪಟ್ಟಣದಲ್ಲಿ ರೈತ, ಕೂಲಿಕಾರ್ಮಿಕ, ಹಮಾಲಿ, ಬಿಸಿಯೂಟ, ಅಂಗನವಾಡಿ, ಬೀದಿಬದಿ ವ್ಯಾಪಾರಸಂಘಗಳು ಸೇರಿದಂತೆ ಇತರೆ ಸಾಮೂಹಿಕ ಸಂಘಟನೆಗಳ ನೇತ್ರುತ್ವದಲ್ಲಿ ಅಖಿಲಭಾರತ ಬಂದ್ ಹಿನ್ನಲೆಯಲ್ಲಿ ನೂರಾರು ಸಂಘಟನೆಯ ಕಾರ್ಯಕರ್ತರು ಬುಧವಾರ ಪ್ರತಿಭಟನಾ ಮೆರವಣಿಗೆ ಮಾಡಿ, ಬುಧವಾರ ಭಾರತ ಬಂದ್‌ಗೆ ಬೆಂಬಲಸೂಚಿಸಿದರು.
ಬAದ್ ಹಿನ್ನಲೆಯಲ್ಲಿ ಶಾಲಾ-ಕಾಲೇಜು, ಬ್ಯಾಂಕ್, ರಸ್ತೆ-ಸಂಚಾರ ಎಂದಿನAತೆ ಕಾರ್ಯನಿರ್ವಹಿಸಿದ್ದು, ಅಂಗಡಿ-ಮುAಗಟ್ಟುಗಳು, ಹೋಟೆಲ್‌ಗಳು ಬಂದ್ ಆಗಿದ್ದವು.
ಪ್ರಾರಂಭದಲ್ಲಿ ಕಾರ್ಮಿಕ ಸಂಘಟನೆಯ ಕಾರ್ಯಕರ್ತರು, ಜಿಂದಾಬಾದ್, ಜಿಂದಾಬಾದ್, ಸಿಐಟಿಯು ಜಿಂದಾಬಾದ್, ರೈತರಿಗೆಹಕ್ಕುಪತ್ರಕೊಡಲೇಬೇಕು, ಕನಿಷ್ಠ ವೇತನವನ್ನು ಜಾರಿಗೊಳಿಸಬೇಕು, ಬಿಸಿಯೂಟ ನೌಕರರ ಸೇವಾವಧಿಯನ್ನು ಖಾಯಂಗೊಳಿಸಬೇಕು, ಬೀದಿಬದಿವ್ಯಾಪಾರಸ್ತರಿಗೆ ಲೈಸೆನ್ಸ್ ಕೊಡಬೇಕು ಎಂದು ಇತರೆ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ, ಪುನಃ ಮುಖ್ಯವ್ರುತ್ತಕ್ಕೆ ತಲುಪಿದರು.
ಪ್ರಾಂತರೈತಸAಘ, ಕ್ರುಷಿಕೂಲಿಕಾರಸಂಘ, ಹಮಾಲಿಸಂಘ, ಅಂಗನವಾಡಿನೌಕರಸAಘ, ಗ್ರಾ.ಪಂ.ನೌಕರಸAಘ, ಬಿಸಿಯೂಟನೌಕರಸಂಘ, ಅಂಗನವಾಡಿನೌಕರಸAಘ, ಕಟ್ಟಡಕಾರ್ಮಿಕಸಂಘ, ದೇವದಾಸಿ ವಿಮೋಚನಾ ಮಹಿಳಾ ಸಂಘಗಳು ಪ್ರತಿಭಟನೆ ನೇತ್ರುತ್ವ ವಹಿಸಿದ್ದವು.
ಪ್ರಾಂತರೈತ ಸಂಘದ ಜಿಲ್ಲಾದ್ಯಕ್ಷ ವಿಎಸ್.ಶಿವಶಂಕರ್, ಕಾಂಗ್ರೆಸ್‌ನ ಕಾರ್ಮಿಕವಿಭಾಗದ ಜಿಲ್ಲಾದ್ಯಕ್ಷ ಕೆ.ಗಾದಿಲಿಂಗಪ್ಪ, ರಸ್ತೆಬದಿವ್ಯಾಪಾರ ಸಂಘದ ಗೌರವಾದ್ಯಕ್ಷ ಹೆಚ್.ಎಂ.ವಿಶ್ವನಾಥಸ್ವಾಮಿ, ತಾಲೂಕುಕಾರ್ಯದರ್ಶಿ ಗಾಳಿಬಸವರಾಜ್ ಮಾತನಾಡಿ, ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಪ್ರತಿಭಟನರ‍್ಯಾಲಿಯಲ್ಲಿ ಕುರುಗೋಡು ಠಾಣಾಧಿಕಾರಿ ಎಂ. ಕ್ರುಷ್ಣಮೂರ್ತಿ ಹಾಗು ಸಿಬ್ಬಂದಿತAಡ ಬಿಗಿಭದ್ರತೆ ಒದಗಿಸಿದ್ದರು.
ಕಾರ್ಮಿಕ ಮುಖಂಡ ಎ.ಮಂಜುನಾಥ್, ಎನ್.ಸೋಮಯ್ಯ, ಆಂಜಿನೇಯ, ಹುಲೆಪ್ಪ, ಬೋಗಟೆಯ್ಯಸ್ವಾಮಿ, ಯಂಕಮ್ಮ, ಅನ್ನಪೂರ್ಣ, ಗೀತಮ್ಮ, ಹೇಮಾವತಿ ಸೇರಿದಂತೆ ಇತರೆ ಕಾರ್ಮಿಕ ಸಂಘಟನೆಯ ನೂರಾರು ಮಂದಿ ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದ್ದರು.
—–೦

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap