ಕಾನಾಹೊಸಹಳ್ಳಿ ಸರಕಾರಿ ಅಸ್ಪತ್ರೆ ಸಿಬ್ಬಂದಿ ಸೇರಿ ಮೂವರಿಗೆ ಸೋಂಕು ದೃಡ, ಆತಂಕದಲ್ಲಿ ಜನರು.

ಸಿರಿನಾಡ ಸುದ್ದಿ, ಕೂಡ್ಲಿಗಿ: ಕಾನಾಹೊಸಹಳ್ಳಿ ಆರೋಗ್ಯ ಕೇಂದ್ರದ ಡಿ ಗ್ರೂಪ್ ನೌಕರ ಮತ್ತು ಎಂ.ಬಿ.ಅಯ್ಯನಹಳ್ಳಿ ಗ್ರಾಮದ 51 ವರ್ಷದ ವ್ಯಕ್ತಿ ಹಾಗೂ 22 ವರ್ಷದ ಮಹಿಳೆಯೊಬ್ಬರಿಗೆ ಸೇರಿ ಒಟ್ಟು ಮೂವರಿಗೆ ಕರೊನಾ ಸೋಂಕು ಶನಿವಾರ ವರದಿಯಿಂದ ದೃಡಪಟ್ಟಿದೆ.
ಆರೋಗ್ಯ ನೌಕರ ಹೊಸಪೇಟೆಯಲ್ಲಿ 10 ದಿನಗಳ ಕಾಲ ವಾಸವಿದ್ದು ಶನಿವಾರ ಕರ್ತವ್ಯ ಹಾಜರಾಗಿದ್ದ ಈ ವೇಳೆ ಜ್ವರ ಕಾಣಿಸಿಕೊಂಡ ಕಾರಣ ಸ್ಥಳೀಯ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಸೋಂಕು ದೃಡಪಟ್ಟಿದೆ. ಎಂ.ಬಿ.ಅಯ್ಯನಹಳ್ಳಿ ಗ್ರಾಮದ ಇಬ್ಬರು ಚಿಕ್ಕಜೋಗಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆನಾರೋಗ್ಯ ನಿಮಿತ್ತ ಚಿಕಿತ್ಸೆಗೆಂದು ಬಂದಾಗ ಕರೊನಾ ತಪಾಸಣೆ ಮಾಡಲಾಗಿದ್ದು ಸೋಂಕು ದೃಡಪಟ್ಟಿದೆ.
ಆರೋಗ್ಯ ಇಲಾಖೆ ನೌಕರನ್ನು ಬಂಡ್ರಿ ಚಿಕಿತ್ಸೆ ಕೇಂದ್ರಕ್ಕೆ ಹಾಗೂ ಎಂ.ಬಿ.ಅಯ್ಯನಹಳ್ಳಿ ವ್ಯಕ್ತಿ ಕೂಡ್ಲಿಗಿ ಕೋವಿಡ್ ಆಸ್ಪತ್ರೆ ಮತ್ತು ಮಹಿಳೆಯನ್ನು ಹೊಂ ಕ್ವಾರೆಂಟೇನ್ ಮಾಡಲಾಗಿದೆ ಸೋಂಕಿತ ನಿವಾಸದ ಪ್ರದೇಶವನ್ನು ಸೀಲ್‌ಡೌನ್ ಮಾಡಿಲಾಗಿದೆ. ಆರೋಗ್ಯ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಸಂಪರ್ಕಿತರ ಸರ್ವೆ ಕಾರ್ಯ ಮುಂದುವರಿದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap