ಕಾನಾಹೊಸಳ್ಳಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಡಿಕೆಶಿ ಪದಗ್ರಹಣ ಕಾರ್ಯಕ್ರಮ ಹಾಗೂ ಪ್ರತಿಜ್ಞೆ ಮಾಡಲಾಯಿತು.

ಕಾನಾಹೊಸಳ್ಳಿ: ಪಟ್ಟಣದಲ್ಲಿ ನ ಶರಣೇಶ್ವರ ವಿದ್ಯಾ ಸಂಸ್ಥೆ ಆವರಣದಲ್ಲಿ ಗುರುವಾರ ಕಾನಾಹೊಸಳ್ಳಿ ಬ್ಲಾಕ್ ನ ವತಿಯಿಂದ ಡಿಕೆಶಿ ಅವರ ರಾಜ್ಯಾದ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ನೇರ ವೀಕ್ಷಣೆ ಏರ್ಪಡಿಸಲಾಗಿತ್ತು ಇದೇ ಸಂದರ್ಭದಲ್ಲಿ ಕಾನಾಹೊಸಳ್ಳಿ ಬ್ಲಾಕ್ ನ ಅದ್ಯಕ್ಷ ಕೃಷ್ಣನಾಯ್ಕ ಮಾತನಾಡಿ ಕಾಂಗ್ರೇಸ್ ಪಕ್ಷ ಬಡವರ ಹಾಗೂ ತಳಮಟ್ಟದವರಿಗೆ ನ್ಯಾಯ ಒದಗಿಸಿ ಕೊಡುವ ಪಕ್ಷ ಇದಾಗಿದ್ದು, ಮುಂಬರುವ ದಿನಗಳಲ್ಲಿ ಹಳ್ಳಿ ಹಳ್ಳಿಗೂ ಹೋಗಿ ಸಂಘಟನೆ ಕಟ್ಟಿ ಮುಂಬರುವ ಸ್ಥಳೀಯ ಚುನಾವಣೆ ಸೇರಿದಂತೆ ವಿಧಾನ ಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿಯೂ ಅಧಿಕಾರ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು, ನಂತರ 2018 ರ ಕೂಡ್ಲಿಗಿ ವಿಧಾನಸಭಾ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಗುಜ್ಜಲ್ ರಘು ಕಾರ್ಯಕರ್ತರಿಗೆ ಸಂವಿಧಾನ ಪೀಠಿಕೆಯನ್ನು ಹೇಳಿವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಕಾರ್ಯಕರ್ತರಿಗೆ ಸಂಘಟನೆ ಯ ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು ಇದೇ ಸಂದರ್ಭದಲ್ಲಿ
ಕಾನಹೊಸಹಳ್ಳಿ ಬ್ಲಾಕ್ ಉಸ್ತಾವಾರಿಯಾದ ಮಾದಿಹಳ್ಳಿ ನಜೀರ್ ಸಾಬ್, ತಾಪಂ ಸದಸ್ಯರಾದ ಗುರುಸಿದ್ದನಗೌಡ, ಪಿ.ಎಲ್.ಡಿ ಬ್ಯಾಂಕ್ ಮಾಜಿ ನಿರ್ದೇಶಕ ಕುಮಾರ್ ಗೌಡ,ಎ. ಪಿ.ಎಂ.ಸಿ. ಸದಸ್ಯ ಜಗದೀಶ್ , ಮಾಜಿ ಕೆ.ಡಿ.ಪಿ.ಸದಸ್ಯರಾದ ಗಪೂರ್ ಸಾಬ್, ಜಿ.ಬೊಮ್ಮಣ್ಣ, ಗ್ರಾ.ಪಂ.ಸದಸ್ಯರಾದ ಮಂಜಣ್ಣ, ಕೂಡ್ಲಿಗಿ ಪ.ಪಂ.ಸದಸ್ಯರಾದ ಸೂಕುರ್, ಆರ್.ಎಸ್.ಎಸ್. ಮಾಜಿ ಅಧ್ಯಕ್ಷರುಗಳಾದ ಕೆಂಚಣ್ಣ,ಇಜಾಜ್ ಅಹ್ಮದ್, ಹಾರೋನ್ ಭಾಷಾ, ಸೂರ್ಯ ಪ್ರಕಾಶ್, ಗುರುಸ್ವಾಮಿ, ವೀರೇಶ್ ಸ್ವಾಮಿ, ಪ್ರಾಕಾಶ್, ನಾಗೇಂದ್ರಪ್ಪ,ಮಹಾಲಿಂಗಪ್ಪ, ಹಾಗೂ ಸುತ್ತಮುತ್ತಲಿನ ಕಾರ್ಯಕರ್ತರು ಸೇರಿದಂತೆ ಇತರರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap