ಕಾನಾಮಡುಗು ಶ್ರೀ ಶರಣ ಬಸವೇಶ್ವರ ದಾಸೋಹ ಮಠದಲ್ಲಿ ಸರಳ ಶ್ರಾವಣ ಅಚರಣೆ.

ಸಿರಿನಾಡ ಸುದ್ದಿ, ಕೂಡ್ಲಿಗಿ: ತಾಲೂಕಿನ ಕಾನಮಡುಗು ಗ್ರಾಮದಲ್ಲಿನ ಇತಿಹಾಸ ಪ್ರಸಿದ್ದ ಶರಣಬಸವೇಶ್ವರ ದಾಸೋಹ ಮಠದಲ್ಲಿ ಕರೋನಾ ಭೀತಿಯ ಹಿನ್ನಲೆಯಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಈ ಬಾರಿಯು ಶ್ರಾವಣ ಮಾಸದ ರುದ್ರಭಿಷೇಕ ಪೂಜಾ ಕಾರ್ಯಕ್ರಮ ಗಳು ಪಾರಂಪರಿಕವಾಗಿ ನಡೆಯುತ್ತದೆ. ಆದರೆ ಭಕ್ತರರೆಲ್ಲರೂ ಸರಳವಾಗಿ ಎಚ್ಚರಿಕೆಯಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಸರಳವಾಗಿ ಅಚರಣೆ ಮಾಡಲು ನಿರ್ಧರಿಸಲಾಗಿದೆ. ಸಮಸ್ತ ಭಕ್ತ ಸಮುಹಾ ಸಹಕರಿಸಬೇಕು ಎಂದು ಶ್ರೀಗಳು ತಿಳಿಸಿದ್ದಾರೆ.
ಶ್ರೀಮಠದಲ್ಲಿ ಮಠದ ಶ್ರಾವಣ ಮಾಸದ ಪಾರಂಪರಿಕ ಪೂಜಾರಾಧನಾ ಕಾರ್ಯಕ್ರಮಗಳು ಸರಕಾರದ ನಿಲುವಿನಂತೆ ಸಾಂಕೇತಿಕವಾಗಿ ಜರುಗಲಿದ್ದು, ಪ್ರತಿ ವರ್ಷ ರುದ್ರಾಭಿಷೇಕ ಪೂಜೆಯಲ್ಲಿ ಭಾಗವಹಿಸುತ್ತಿದ್ದ ಮತ್ತು ಈ ವರ್ಷ ಭಾಗವಹಿಸಲು ಇಚ್ಛಿಸಿದ ಸದ್ಭಕ್ತರು ತಮ್ಮ ತಮ್ಮ ಮನೆಗಳಲ್ಲಿಯೇ ಶ್ರೀ ಶರಣ ಬಸವೇಶ್ವರ ಸ್ವಾಮಿಗೆ ಪೂಜಾರ್ಚನೆ, ಆರಾಧನೆ ಮಾಡಬೇಕೆಂದು ತಿಳಿಸಿರುವ ಶ್ರೀಗಳು,
ಈಗಾಗಲೇ ಅಂಚೆ ಪತ್ರಗಳಲ್ಲಿ ತಮ್ಮೆಲ್ಲರ ಅಪೇಕ್ಷೆಯಂತೆ ಮೊದಲೇ ತಿಳಿಸಿದ ದಿನಾಂಕಗಳAದು ತಮ್ಮ ಕುಟುಂಬದ ಹೆಸರಿನಲ್ಲಿ ಶ್ರೀ ಸ್ವಾಮಿಗೆ ಸಂಕಲ್ಪ ನೆರವೇರಿಸಿ, ರುದ್ರಭಿಷೇಕ ಪೂಜೆ ಸಲ್ಲಿಸಿ, ಪ್ರಸಾದವನ್ನು ಅಂಚೆಯ ಮೂಲಕ ಕಳುಹಿಸಿ ಕೊಡಲಾಗುತ್ತದೆ.
ಸದ್ಭಕ್ತರು ಶ್ರೀ ಮಠದಲ್ಲಿ ಗೂಗಲ್ ಪೇ, ಪೋನ್ ಪೇ ಅಕೌಂಟ್ ಟ್ರಾನ್ಸ್ ಫರ್ ಸೇರಿದಂತೆ ಅನ್ ಲೈನ್ ಸೇವೆಗಳನ್ನು ಸಲ್ಲಿಸಲು ಅವಕಾಶವಿದೆ. Phoಟಿe ಠಿಚಿಥಿ, ಉoogಟe ಠಿಚಿಥಿ ಟಿo: 9986622241
● ಕೋರೋನಾ ಸೋಂಕು ಹರಡುವುದು ವ್ಯಾಪಕವಾಗಿರುವುದರಿಂದ ಶ್ರೀ ಮಠದಲ್ಲಿ ವಸತಿ ವ್ಯವಸ್ಥೆಯನ್ನು ನಿಷೇಧಿಸಲಾಗಿದೆ
● ಹೆಚ್ಚಿನ ಮಾಹಿತಿಗಾಗಿ ಶ್ರೀ ಮಠದಲ್ಲಿ ಸಂಪರ್ಕಿಸಿ: ದಾ.ಮ. ಐಮಡಿ ಶರಣಾರ್ಯರು, ಧರ್ಮಾಧಿಕಾರಿಗಳು ಶರಣ ಬಸವೇಶ್ವರ ದಾಸೋಹ ಮಠ, ಕಾನಾಮಡುಗು, ಕೂಡ್ಲಿಗಿ ತಾಲೂಕು ಪೋನ್ ಸಂಖ್ಯೆ: 9986622241, 9448006379

● ಶ್ರೀಗಳ ಸಾಮಾಜಿಕ ಕಳಕಳಿಯ ಸಲಹೆಗಳು.
ಶ್ರೀ ಮಠದ ಸದ್ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ… ಅನವಶ್ಯಕವಾಗಿ ಎಲ್ಲಿಯೂ ಹೊರ ಹೋಗಬೇಡಿ…
ಸರ್ಕಾರಕ್ಕೆ ನೀವೊಂದು ಸಂಖ್ಯೆಯಷ್ಟೇ…!
ಆದರೆ, ನಿಮ್ಮ ಕುಟುಂಬಕ್ಕೆ ನೀವೇ ಆಧಾರ…!! ಎನ್ನುವುದನ್ನು ಪ್ರತಿಯೊಬ್ಬರು ಮರೆಯಬಾರದು ಎಂದು ಸಲಹೆ ನೀಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap