ಕರೋನಾ ಹಿನ್ನಲೆ ಸರಳವಾಗಿ ನಡೆದ ಬಕ್ರೀದ್.

ಸಿರಿನಾಡ ಸುದ್ದಿ, ಕುರುಗೋಡು: ಪಟ್ಟಣದ ನಾನಾ ಕಡೆ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದ ನಿಮ್ಮಿತ್ತ ಶನಿವಾರ ಕೊರೋನಾ ವೈರಸ್ ಬೀತಿಯಿಂದ ಸರಳವಾಗಿ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು.
ಮುಸ್ಲಿಂ ಬಾಂಧವರಿಗೆ ಬಹಳ ಪವಿತ್ರವಾದ ದೊಡ್ಡ ಹಬ್ಬ ಬಕ್ರೀದ್ ಹಬ್ಬ ಪ್ರತಿವರ್ಷ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಭಾಂಧ್ಯವ್ಯದ ಪ್ರತೀಕವಾದ ಪರಸ್ಪರ ಅಪ್ಪುಗೆ ಸಲ್ಲಿಸುತ್ತಿದ್ದರು. ಆದರೆ ಈ ವರ್ಷ ಕೋರೋನಾ ವೈರಸ್ ಬೀತಿಯಿಂದ ಮೂರು ನಾಲ್ಕು ಮನೆಯವರು ಕೂಡಿಕೊಂಡು ತಮ್ಮ ಮನೆಯ ಮೇಲೆ ಭಕ್ತಿ ಭಾವದಿಂದ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಅಪ್ಪುಗೆ ಇಲ್ಲದಂತೆ ಸರಳವಾಗಿ ಹಬ್ಬ ಆಚರಿಸಿದರು.
ಪಟ್ಟಣ ಸೇರಿದಂತೆ ಗೆಣಿಕೆಹಾಳ್, ಕ್ಯಾಧಿಗೆಹಾಳ್, ಹೊಸ ಗೆಣಿಕೆಹಾಳ್, ವದ್ದಟ್ಟಿ, ಸಿದ್ದಮ್ಮನಹಳ್ಳಿ, ಕುಡಿತಿನಿ ಹಾಗೂ ಮತ್ತಿತರೆ ಗ್ರಾಮಗಳಲ್ಲಿ ನಾನಾ ಕಡೆ ಸರಳ ರೀತಿಯಲ್ಲಿ ಬಕ್ರೀದ್ ಹಬ್ಬ ಆಚರಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap