ಕರೋನಾ ವೈರಸ್ ಹರಡದಂತೆ ಜಿಲ್ಲೆಯಲ್ಲಿ ಕಟ್ಟೆಚ್ಚರದ ಕ್ರಮ: ಜಿಲ್ಲಾಧಿಕಾರಿ ವೆಂಕಟೇಶ ಕುಮಾರ

ಸಿರಿನಾಡ ಸುದ್ದಿ, ರಾಯಚೂರು: ನೋವೆಲ್ ಕರೋನಾ ವೈರಸ್ ರೋಗ ಹರಡದಂತೆ ಜಿಲ್ಲೆಯಲ್ಲಿ ಅತ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಜಿಲ್ಲೆಯ ನಾಗರಿಕರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ತಿಳಿಸಿದರು.
ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೋನಾ ವೈರಸ್ ಕುರಿತಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲು ಹಮ್ಮಿಕೊಳ್ಳಲಾಗಿದ್ದ ತುರ್ತು ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೈದಾರಾಬಾದ್‌ನಲ್ಲಿ ನಿನ್ನೆ ಕರೋನಾ ವೈರಸ್ ಪೀಡಿತ ರೋಗಿಯೊಬ್ಬರು ಪತ್ತೆಯಾದ ಹಿನ್ನಲೆಯಲ್ಲಿ ತೆಲಂಗಾಣಕ್ಕೆ ಗಡಿಭಾಗವಾದ ರಾಯಚೂರು ತಾಲೂಕು ಹಾಗೂ ಜಿಲ್ಲೆಯಲ್ಲಿ ರೋಗ ಹರಡದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಕ್ರಮ ಕೈಗೊಳ್ಳಬೇಕು, ರೋಗಿಗಳನ್ನು ಜಿಲ್ಲೆಯ ಗಡಿ ಭಾಗದಲ್ಲಿಯೇ ಪತ್ತೆ ಹಚ್ಚಲು ವಿವಿದೆಡೆ ೫ ಕಡೆ ತಪಾಸಣಾ ಕೇಂದ್ರಗಳನ್ನು ಕೂಡಲೇ ತೆರೆಯುವಂತೆ ಅವರು ಸಂಬAಧಿಸಿದ ಇಲಾಖೆಗಳಿಗೆ ಸೂಚನೆ ನೀಡಿದರು.
ಸಿಂಗನೋಡಿ, ಮಂತ್ರಾಲಯA-ಯರಗೇರಾದ ಯರಗೇರಾ ಕ್ರಾಸ್, ಶಕ್ತಿನಗರ, ರಾಯಚೂರು ನಗರದ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆದು, ವಿವಿಧ ವಾಹನಗಳಲ್ಲಿ ಆಗಮಿಸುವ ಪ್ರಯಾಣಿಕರಲ್ಲಿ ರೋಗದ ಲಕ್ಷಣಗಳುಳ್ಳವರನ್ನು ಮಾತ್ರ ತಪಾಸಣೆ ನಡೆಸುವಂತೆ, ಈ ತಪಾಸಣೆ ಕೇಂದ್ರದಲ್ಲಿ ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯನಿರ್ವಹಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಯವರು ತಪಾಸಣೆ ವೇಳೆ ಈ ರೋಗಲಕ್ಷಣಗಳುಳ್ಳವರು ಕಂಡುಬAದರೆ ಅವರನ್ನು ತಕ್ಷಣ ಪ್ರತ್ಯೇಕ ವಾಹನಗಳಲ್ಲಿ ರಿಮ್ಸ್ ಅಥವಾ ನವೋದಯ ಆಸ್ಪತ್ರೆಗೆ ದಾಖಲಿಸುವಂತೆ ಸೂಚನೆ ನೀಡಿದರು.
ಕರೋನಾ ವೈರಸ್ ರೋಗಿಗಳಿಗಾಗಿ ನವೋದಯ ಹಾಗೂ ರಿಮ್ಸ್ ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡ್ಗಳನ್ನು ತೆರೆಯುವಂತೆ ತಿಳಿಸಿದ ಅವರು, ರೋಗಿ ಕಂಡುಬAದಲ್ಲಿ ರೋಗಿಯ ರಕ್ತದ ಸ್ಯಾಂಪಲ್‌ನ್ನು ಬೆಂಗಳೂರು ಮೆಡಿಕಲ್ ಕಾಲೇಜಿಗೆ ಕಳುಹಿಸಲಾಗುವುದು. ಈ ರೋಗ ಹರಡುವ ರೀತಿ ಹಾಗೂ ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ನಗರ ಸ್ಥಳೀಯ ಸಂಸ್ಥೆಗಳು, ತಹಸೀಲ್ದಾರ್ ಕಚೇರಿಗಳು, ತಾಲೂಕ ಪಂಚಾಯತ್ ಕಚೇರಿಗಳು ಹಾಗೂ ಇತರೆ ಜನಸಂದಣಿ ಪ್ರದೇಶದಲ್ಲಿ ಜಾಗೃತಿ ಮೂಡಿಸಬೇಕು, ರೋಗದ ಬಗ್ಗೆ ಮಾಹಿತಿ ನೀಡುವ ಪ್ರಚಾರ ಸಾಮಗ್ರಿಗಳನ್ನು ಸಾರ್ವಜನಿಕರಿಗೆ ಒದಗಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರಿಗೆ ಜಿಲ್ಲಾಧಿಕಾರಿಯವರು ತಿಳಿಸಿದರು.
ಕರೋನಾ ವೈರಸ್ ಬಗ್ಗೆ ಯಾವುದೇ ಕಾರಣಕ್ಕೂ ಜನರು ಭಯಭೀತರಾಗಬಾರದು. ರೋಗ ಹರಡದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಯಚೂರು ತಾಲೂಕು ತೆಲಂಗಾಣ ರಾಜ್ಯದ ಗಡಿಭಾಗದಲ್ಲಿರುವುದರಿಂದ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರಿದ್ದು, ವಿಶೇಷ ಕ್ರಮಗಳನ್ನು ಕೈಗೊಳ್ಳಲು ತಾಲೂಕು ಆರೋಗ್ಯ ಅಧಿಕಾರಿಗೆ ಈ ಸಂದರ್ಭದಲ್ಲಿ ಸೂಚಿಸಿದರು.
ಇತ್ತೀಚೆಗೆ ಮಧ್ಯ ಪ್ರಾಚ್ಯದೇಶಗಳಿಗೆ ಪ್ರವಾಸ ಅಥವಾ ಇತರೆ ಕಾರ್ಯನಿಮಿತ್ತ ಹೋಗಿ ಬಂದ ನಗರವಾಸಿಗಳನ್ನು ಗುರುತಿಸಿ ಅವರನ್ನು ತಪಾಸಣೆ ನಡೆಸಬೇಕು. ನಗರದ ಅರಬ್ ಮೊಹಲ್ಲ, ಆಂದ್ರೂನ್ ಕಿಲ್ಲಾ ಸೇರಿದಂತೆ ವಿದೇಶಗಳಿಗೆ ಭೇಟಿ ನೀಡಿ ವಾಪಾಸಾಗುವ ಜಿಲ್ಲೆಯ ನಾಗರೀಕರನ್ನು ನಗರಸಭೆ ವತಿಯಿಂದ ಗುರುತಿಸುವ ಕಾರ್ಯವಾಗಬೇಕು, ಅಲ್ಲಿ ಕರೋನಾ ವೈರಸ್ ರೋಗದ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಕಂಟ್ರೋಲ್ ರೂಮ್ ಸ್ಥಾಪನೆ: ಕರೋನಾ ವೈರಸ್ ಬಗ್ಗೆ ಮಾಹಿತಿ ದಾಖಲಿಸಿಕೊಳ್ಳಲು ಜಿಲ್ಲೆಯಲ್ಲಿ ೨೪/೭ ಕಾರ್ಯನಿರ್ವಹಿಸುವ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಸೂಚಿಸಿದರು.
ಕರೋನಾ ವೈರಸ್ ರೋಗ ಹಾಗೂ ಚಿಕಿತ್ಸೆಯ ಕುರಿತು ಮಾಹಿತಿ ನೀಡಲು ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗುವುದು. ನಾಗರಿಕರು ೦೮೫೩೨-೨೨೬೦೨೦ಗೆ ಸಂಪರ್ಕಿಸಬಹುದಾಗಿದೆ ಎಂದು ಡಿಎಚ್‌ಒ ಡಾ. ರಾಮಕೃಷ್ಣ ಸಭೆಗೆ ತಿಳಿಸಿ, ನೋವೆಲ್ ಕರೋನಾ ವೈರಸ್ ರೋಗವು ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದೆ. ತೀವ್ರ ಜ್ವರದ ಪ್ರಾರಂಭ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಹಾಗೂ ಬೇದಿ, ನ್ಯುಮೋನಿಯಾ ಇದರ ಲಕ್ಷಣವಾಗಿದೆ ಎಂದರು.
ಕೊರೋನಾ ವೈರಸ್ ಹರಡುವ ರೀತಿ: ಸಾಮಾನ್ಯ ಫ್ಲೂ ಹರಡುವ ರೀತಿಯಲ್ಲಿಯೇ ಕೊರೋನಾ ಹರಡುತ್ತದೆ ಸಾಮಾನ್ಯವಾಗಿ ಸೊಂಕಿತರು ಕೆಮ್ಮಿದಾಗ, ಸೀನಿದಾಗ, ಈ ವೈರಸ್‌ಗಳು ಹರಡುತ್ತವೆ. ವೈಯ್ಯಕ್ತಿಕ ಸ್ವಚ್ಚತೆ ಇಲ್ಲದೇ ಮೂಗು, ಬಾಯಿ ಕೈ ತೊಳೆಯದೇ ಮುಟ್ಟುವುದರಿಂದ ಸೊಂಕು ಹರಡಬಹುದು.
ಸೊಂಕು ಪತ್ತೆ ಹಚ್ಚುವಿಕೆ: ಲಕ್ಷಣಗಳು ಕಂಡುಬAದ ವ್ಯಕ್ತಿಯ ಮೂಗು, ಗಂಟಲಿನ ಸ್ರಾವದ ಲೇಪನ ಮತ್ತು ರಕ್ತದ ಮಾದರಿಯನ್ನು ಪ್ರಯೋಗಶಾಲೆಯಲ್ಲಿ ಪರೀಕ್ಷೆಗೆ ಒಳಪಡಿಸಿ ಸೋಂಕನ್ನು ದೃಢಪಡಿಸಲಾಗುತ್ತದೆ.
ರೋಗ ಹರಡದಂತೆ ಮುಂಜಾಗೃತ ಕ್ರಮಗಳು: ಕೆಮ್ಮುವಾಗ ಮತ್ತು ಸೀನುವಾಗ ಬಾಯಿಗೆ ಕರವಸ್ತç ಅಡ್ಡ ಹಿಡಿಯುವ ಮತ್ತು ನಿಮ್ಮ ಕೈಯನ್ನು ಚನ್ನಾಗಿ ತೊಳೆದುಕೊಳ್ಳುವ ಮೂಲಕ ಸರಳ ನೈರ್ಮಲ್ಯವನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅನಾರೋಗ್ಯದಿಂದ ಇರುವ ಅಥವಾ ಕೆಮ್ಮು ಮತ್ತು ನೆಗಡಿ ಇತ್ಯಾದಿ ಅನಾರೋಗ್ಯದ ಲಕ್ಷಣಗಳನ್ನು ಹೊಂದಿರುವ ಜನರೊಂದಿಗೆ ನಿಕಟ ಸಂಪರ್ಕ ಹೊಂದಬಾರದು, ಪ್ರಾಣಿಗಳ ನೇರ ಸಂಪರ್ಕವನ್ನು, ಬೇಯಿಸದ ಕಚ್ಚಮಾಂಸವನ್ನು ಸೇವನೆ ಮಾಡಬಾರದು. ಈ ರೋಗಕ್ಕೆ ನಿಖರವಾದ ಚಿಕಿತ್ಸೆ ಇರುವುದಿಲ್ಲ ರೋಗದ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ ಯಾವುದೇ ಲಸಿಕೆ ಲಭ್ಯವಿಲ್ಲ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರು ಅನುಸರಿಸಬೇಕಾದ ಮುಂಜಾಗೃತಾ ಕ್ರಮಗಳು ಇಂತಿವೆ: ಸೊಂಕು ಪೀಡಿತರ ಸಂಪರ್ಕದಿAದ ದೂರವಿರುವುದು, ಶಂಕಿತರೋಗಿಯು ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು ಮತ್ತು ಟ್ರಿಪಲ್, ಲೇಯರ್, ಮಾಸ್ಕ್, ಬಳಸುವುದು. ವೈಯಕ್ತಿಕ ಸ್ವಚ್ಚತೆ ಕಾಪಾಡಿ ಕೊಳ್ಳುವುದು ವಿಶೇಷವಾಗಿ ಸಾಬೂನಿನಿಂದ ಕೈ ತೊಳೆದುಕೊಳ್ಳುವುದು. ಕೆಮ್ಮುವಾಗ ಮತ್ತು ಸೀನುವಾಗ ಮಾಸ್ಕ್ ಅಥವಾ ಕೈವಸ್ತç ಉಪಯೋಗಿಸುವುದು. ಸಾರ್ವಜನಿಕರ ಸ್ಥಳಗಳಲ್ಲಿ ಉಗುಳಬಾರದು ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬ ಹುದು.
ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಚನ್ನಾಗಿ ಬೇಯಿಸಿ ಉಪಯೊಗಿಸುವುದು. ಅಸುರಕ್ಷಿತವಲ್ಲದ ಕಾಡು ಪ್ರಾಣಿ ಮತ್ತು ಸಾಕು ಪ್ರಾಣಿಗಳನ್ನು ಮುಟ್ಟಬಾರದು, ವೈರಸ್ ಮುಖ್ಯವಾಗಿ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಶ್ವಾಸಕೋಶ ಹಾಗೂ ಉಸಿರಾಟದ ತೊಂದರೆ ಉಂಟುಮಾಡುತ್ತದೆ. ಈ ವೈರಸ್ ಮೊದಲಬಾರಿಗೆ ಚೀನಾದ ವುಹಾನ್‌ನಲ್ಲಿ ಪತ್ತೆಯಾಗಿದೆ.
ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ರೀತಿ: ಸೊಂಕಿತ ವ್ಯಕ್ತಿಯು ಸೀನಿದಾಗ ಮತ್ತು ಕೆಮ್ಮಿದಾಗ, ಸೊಂಕಿತ ವ್ಯಕ್ತಿಯ ಜೊತೆ ನಿಕಟ ಸಂಪರ್ಕದಲ್ಲಿರುವಾಗ, ಸೊಂಕಿತ ವ್ಯಕ್ತಿಯ ಹಸ್ತ ಲಾಘವ ಮಾಡುವಾಗ, ಸೊಂಕಿತ ವ್ಯಕ್ತಿಯು ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೇ ಬಳಸಿದಾಗ ಮತ್ತು ಸ್ವಚ್ಚಗೊಳಿಸದ ಮತ್ತು ಸುರಕ್ಷತಾ ವಲ್ಲದ ಕೈಗಳಿಂದ ಕಣ್ಣು, ಮೂಗು ಬಾಯಿ ಮುಟ್ಟುವದರಿಂದ ಹರಡುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಲಕ್ಷಿö್ಮÃಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ, ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ಲಿಂಗಸೂಗೂರು ಸಹಾಯಕ ಆಯುಕ್ತ ರಾಜಶೇಖರ ಡಂಬಳ, ರಿಮ್ಸ್ ನಿರ್ದೇಶಕ ಪೀರಾಪೂರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ, ರಾಯಚೂರು ತಾಲೂಕು ವೈದ್ಯಾಧಿಕಾರಿ ಡಾ.ಶಕೀಲ್, ಜಿಲ್ಲೆಯ ಎಲ್ಲಾ ತಹಸೀಲ್‌ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ್ ಸೇರಿದಂತೆ ಸಂಬAಧಿಸಿದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap