ಕರೋನಾ ಜಾಗೃತಿ ವಾಹನಕ್ಕೆ ಚಾಲನೆ

????????????????????????????????????

ಸಿರಿನಾಡ ಸುದ್ದಿ, ಸಿರುಗುಪ್ಪ: ನಗರದ ಬಿಜೆಪಿ ಕಛೇರಿಯ ಆವರಣದಲ್ಲಿ ಕೋವಿಡ್-19 ಸೋಂಕು ಹರಡುದನ್ನು ತಡೆಗಟ್ಟಲು ಬಿಜೆಪಿ ಪಕ್ಷದ ವತಿಯಿಂದ ಕರೋನಾ ಜಾಗೃತಿ ವಾಹನಕ್ಕೆ ಶಾಸಕ ಎಂ.ಎಸ್.ಸೋಮಲಿ0ಗಪ್ಪ ಮತ್ತು ಬಳ್ಳಾರಿ ಶಾಸಕ ಜಿ.ಸೋಮಶೇಖರ ರೆಡ್ಡಿ ಪಕ್ಷದ ಧ್ವಜವನ್ನು ತೋರಿಸುವ ಮೂಲಕ ಚಾಲನೆ ನೀಡಿದರು.
ನಂತರ ಶಾಸಕ ಎಂ.ಎಸ್.ಸೋಮಲಿ0ಗಪ್ಪ ಮಾತನಾಡಿ, ವಿಶ್ವವ್ಯಾಪ್ತಿಯಲ್ಲಿ ಅತಿವೇಗವಾಗಿ ಹರಡುತ್ತಿರುವ ಕರೋನಾ ವೈರಸ್‌ನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರಕಾರವು ಅನೇಕ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೋಳಿಸಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದು, ಪ್ರತಿಯೊಬ್ಬರು ಕರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಬೇಕು, ಅನಗತ್ಯವಾಗಿ ಹೊರಗಡೆ ಓಡಾಡುವುದನ್ನು ನಿಲ್ಲಿಸಿಬೇಕು, ಪ್ರತಿಯೊಬ್ಬರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳ ಬೇಕು, ಆಗಾಗ ಕೈಗಳನ್ನು ಸ್ಯಾನಿಟೈಸರ್ ಹಾಗೂ ಸೊಪಿನಿಂದ ತೊಳೆಯ ಬೇಕು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕಷಾಯ ಅಥವಾ ಬಿಸಿನೀರನ್ನು ಕುಡಿಯಬೇಕು, ವಸ್ತು ಅಥವಾ ವ್ಯಕ್ತಿಗಳನ್ನು ಅನಗತ್ಯವಾಗಿ ಸ್ಪರ್ಶಿಸದೆ ಇರುವುದು ಹೀಗೆ ಮೇಲಿನ ಎಲ್ಲಾ ಅಂಶಗಳನ್ನು ಅಳವಡಿಸಿಕೊಂಡಲ್ಲಿ ಕರೋನಾ ವೈರಸ್‌ನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.
ಈ ಕರೋನಾ ಜಾಗೃತಿ ವಾಹನವು ಪ್ರತಿಯೊಂದು ವಾರ್ಡ, ಗ್ರಾಮಗಳಲ್ಲಿ, ಬೂತ್ ಮಟ್ಟದಲ್ಲಿ ಕರೋನಾ ಜಾಗೃತಿ ಹಾಡುಗಳು, ವಾಕ್ಯಗಳ ಮೂಲಕ ಸಂಚಾರಿಸುತ್ತದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಬಿಜೆಪಿ ತಾ.ಅಧ್ಯಕ್ಷ ಆರ್.ಸಿ.ಪೊಂಪನಗೌಡ, ಕಾರ್ಯದರ್ಶಿ ಮಲ್ಲಿಕಾರ್ಜುನ, ಯುವ ಮೋರ್ಚ ತಾ.ಅಧ್ಯಕ್ಷ ಎಂ.ಎಸ್.ಸಿದ್ದಪ್ಪ ಸೇರಿದಂತೆ ಬಿಜೆಪಿ ಸದಸ್ಯರು ಕಾರ್ಯರ್ತರು ಮುಖಂಡರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap