ಕತ್ತೆಬೆನ್ನೂರು : ವಯೋನಿವೃತ್ತಿ ಹೊಂದಿದ ಶಿಕ್ಷಕರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ.

ಸಿರಿನಾಡ ಸುದ್ದಿ, ಹೂವಿನಹಡಗಲಿ: ತಾಲೂಕಿನ ಕತ್ತೆಬೆನ್ನೂರು ಗ್ರಾಮದಲ್ಲಿ ವಯೋನಿವೃತ್ತಿ ಹೊಂದಿದ ಶಿಕ್ಷಕರಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು.
ಕೋವಿಡ್-19 ನಿಮಿತ್ತ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ, ಬೀಳ್ಕೊಡುಗೆ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಸತತ 10 ವರ್ಷಗಳ ಕಾಲ ಹಿಂದಿ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಡಿ.ಅಮೃತಗೌಡ ಹಾಗೂ ಪಕ್ಕದ ಬನ್ನಿಮಟ್ಟಿ ಪ್ಲಾಟಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದಿದ ಹೊಳಲಪ್ಪ ಶಿಕ್ಷಕರಿಗೆ ಇಲಾಖಾ ವತಿಯಿಂದ ಸರಳವಾಗಿ ಬೀಳ್ಕೊಡಿಗೆ ನೆರೆವೇರಿಸಲಾಯಿತು. ಮಕರಬ್ಬಿಯ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಗುರುಗಳಾದ ಕೆ.ಅಬ್ದುಲ್ ಅಜೀಜ್ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಹೆಚ್.ಕೆ.ಚಂದ್ರಪ್ಪ, ಸಿಆರ್‌ಪಿಗಳಾದ ಹಡಗಲಿ ಬಸವರಾಜ, ಖಾದರ್‌ಸಾಬ್, ಪರಶುರಾಮ್, ತಾಲೂಕ ಬಿಸಿ ಊಟದ ಅಧಿಕಾರಿ ಪಿ.ಪ್ರಕಾಶ್, ಮುಖ್ಯ ಗುರುಗಳಾದ ಇ.ಶೇಖ್ರಪ್ಪ ಉಪಸ್ಥಿತರಿದ್ದರು. ಶಿಕ್ಕರಾದ ಪಿ.ಸಿದ್ದಪ್ಪ, ಎಂ.ರಾಜಸಾಬ್, ಜೆ.ಕೊಟ್ರೇಶ್ ಇತರರು ಭಾಗವಹಿಸಿದ್ದರು.
ಶಿಕ್ಷಕ ಬಿ.ಮಂಜಪ್ಪ ಪ್ರಾರ್ಥನೆ ಹಾಡಿದರು. ಶಿಕ್ಷಕ ಎನ್. ಮಂಜುನಾಥ ಸ್ವಾಗತಿಸಿದರು. ಹೈಹಿಕ ಶಿಕ್ಷಕ ಜಿ.ನಾಗರಾಜ ನಿರ್ವಹಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap