ಕಂಪ್ಲಿ ತಾ.ಪಂ. ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪ್ರಕಟ, ಗರಿಗೆದರಿದ ರಾಜಕೀಯ ಚುಟುವಟಿಕೆ.

ಸಿರಿನಾಡ ಸುದ್ದಿ ಕಂಪ್ಲಿ: ನೂತನ ಕಂಪ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸರಕಾರ ಮೀಸಲಾತಿ ಪ್ರಕಟಿಸಿದ್ದು, ಆಕಾಂಕ್ಷಿಗಳಲ್ಲಿ ಆಸೆಗರಿದೆದರಿವೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಎಸ್ಸಿ ಮೀಸಲು ನಿಗಧಿಪಡಿಸಿದೆ. ಜನವರಿ 26 ರಂದು ನೂತನ ತಾ.ಪಂ.ಅಸ್ತಿತ್ವಕ್ಕೆ ಬಂದಿತು. ಈ ತಾ.ಪಂ.ಗೆ ಒಟ್ಟು ಒಂಬತ್ತು ಜನ ಸದಸ್ಯರಿದ್ದಾರೆ.
ಈ ಪೈಕಿ 6 ಜನ ಕಾಂಗ್ರೆಸ್, 3 ಜನ ಬಿಜೆಪಿ ಸದಸ್ಯರಿದ್ದಾರೆ. ವಿಶೇಷವಾಗಿ ಎರಡೂ ಪಕ್ಷಗಳಲ್ಲಿ ತಲಾ ಒಬ್ಬರು ಮಹಿಳಾ ಸದಸ್ಯರು ಆಯ್ಕೆಯಾಗಿದ್ದಾರೆ. ಸುಗ್ಗೇನಹಳ್ಳಿ ತಾ.ಪಂ.ಸದಸ್ಯೆ ಕೆ.ಉಮಾದೇವಿ ಪಕ್ಷೇತರರಾಗಿ ಆಯ್ಕೆಯಾಗಿದ್ದರೂ, ಇದೀಗ ಕಾಂಗ್ರೆಸ್‌ನ ಸಹ ಸದಸ್ಯರಾಗಿದ್ದಾರೆ. ಬಹುತೇಕ 6 ಜನ ಸದಸ್ಯರಿರುವ ಕಾಂಗ್ರೆಸ್ ತೆಕ್ಕೆಗೆ ಅಧ್ಯಕ್ಷ ಸ್ಥಾನ ಅಲಂಕರಿಸುವ ಸಾಧ್ಯತೆಗಳಿದ್ದು, ತಾ.ಪಂ.ಸದಸ್ಯೆ ಕೆ.ಉಮಾದೇವಿ ಹೆಸರು ಕೇಳಿ ಬರುತ್ತಿದೆ.
ಬಿಜೆಪಿಯ ಸಣಾಪುರ ತಾ.ಪಂ.ಸದಸ್ಯೆ ಸುಜಾತಾ ರಘುರಾಮ್ ಪೈಪೋಟಿ ನೀಡುವ ಅವಕಾಶಗಳಿವೆ. ಉಪಾಧ್ಯಕ್ಷ ಸ್ಥಾನ ಎಸ್ಸಿಗೆ ಮೀಸಲಿದ್ದು, ಕಾಂಗ್ರೆಸ್‌ನ ನೆಲ್ಲೂಡಿ ತಾ.ಪಂ.ಸದಸ್ಯ ಎಚ್.ಒಬಳೇಶ್, ಹಂಪಾದೇವನಹಳ್ಳಿ ತಾ.ಪಂ.ಸದಸ್ಯ ಎಚ್.ಈರಣ್ಣ ಇದ್ದಾರೆ. ಇವರಲ್ಲಿ ಹೈಕಮಾಂಡ್ ಯಾರ ಹೆಸರು ಸೂಚಸಲಿದೆ ಎಂಬುದು ಜನರ ಪ್ರಶ್ನೆಯಾಗಿದೆ. ಬಿಜೆಪಿಯಿಂದ ಮೆಟ್ರಿ ತಾ.ಪಂ.ಸದಸ್ಯ ಸಿ.ಡಿ.ಮಹಾದೇವ ಸ್ಪರ್ಧಿಸುವ ಅವಕಾಶವಿದೆ.
ಆದರೆ ಇವರು ಈ ಹಿಂದೆ ಹೊಸಪೇಟೆ ತಾ.ಪಂ.ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಈಗ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವರೆ ಎಂದು ಅವರ ಬೆಂಬಲಿಗರು ಕೇಳುತ್ತಿದ್ದಾರೆ. ಇದೀಗ ತಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸರಕಾರ ಮೀಸಲು ನಿಗಧಿಪಡಸಿದ್ದು, ಚುನಾವಣೆ ದಿನಾಂಕ ಪ್ರಕಟಿಸಬೇಕಿದೆ. ನೂತನ ತಾ.ಪಂ.ಅಧ್ಯಕ್ಷ, ಉಪಾಧ್ಯಕ್ಷರು ಯಾರು ಆಗುತ್ತಾರೆ ಎನ್ನುವ ಕುತೋಹಲ ಜನರಲ್ಲಿ ಉಂಟಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap