ಏಳುಬೆಂಚಿ ಗ್ರಾಮದ 2ನೇ ವ್ಯಕ್ತಿಗೆ ಜಿಂದಾಲ್ ನಂಜು. ! ಆತಂಕದಲ್ಲಿ ಜನರು.

ಸಿರಿನಾಡ ಸುದ್ದಿ, ಕುರುಗೋಡು:ಸಮೀಪದ ಏಳುಬೆಂಚಿ ಗ್ರಾಮದಲ್ಲಿ 25 ವರ್ಷದ ಯುವಕನಿಗೆ ಕೊರೋನಾ ಸೋಂಕು ಸೋಮವಾರ ದೃಢ ಪಟ್ಟಿದ್ದು, ಗ್ರಾಮದ ಜನರಲ್ಲಿ ಭಯದ ವಾತಾವರಣ ಹೆಚ್ಚಾಗಿದೆ.

ಈಗಾಗಲೇ ಈ ವಾರದ ಹಿಂದೆಗ್ರಾಮದಲ್ಲಿ ವಾರದ ಹಿಂದೆ ಒಬ್ಬರಿಗೆ ಸೋಂಕು ಹರಡಿದ್ದು, ಅವರು ಇನ್ನೂ ಗುಣಮುಖ ರಾಗದೆ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಮತ್ತೊಬ್ಬ ಯುವಕನಿಗೆ ಸೋಂಕು ತಗುಲಿದ್ದು ಜನರಲ್ಲಿ ಇನ್ನಷ್ಟು ಆತಂಕದ ಮನೆ ಮಾಡಿದೆ.
ಯುವಕ ನಿತ್ಯ ಜಿಂದಾಲ್ ಕೆಲಸಕ್ಕೆ ಹೋಗಿ ಬರುತಿದ್ದ, ಈ ಹಿನ್ನಲೆ ಜೂ. 18 ಕ್ಕೆ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದು, ಸೋಮವಾರ ಪಾಸಿಟಿವ್ ಇರುವ ವರದಿ ಕಂಡು ಬಂದಿದ್ದು, ಯುವಕನ ಮನೆಗೆ ವೈದ್ಯಾಧಿಕಾರಿ ರವಿಚಂದ್ರ, ತಾಪಂ ಇ ಒ ಮಡಗಿನ ಬಸಪ್ಪ, ಪಿಡಿಒ ರಾಮರಾವ್, ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ,
ಸೋಂಕು ಬಂದ ಯುವಕನನ್ನು ಬಳ್ಳಾರಿ ವಿಮ್ಸ್ ಗೆ ಅಂಬ್ಯುಲೆನ್ಸ್ ಮೂಲಕ ಕರೆದೊಯ್ಯಲಾಗಿದೆ. ಇನ್ನೂ ಏಳುಬೆಂಚಿ ಗ್ರಾಮವನ್ನು ಕಂಟೈನ್ಮೆಂಟ್ ಪ್ರದೇಶವನ್ನಾಗಿಸಿ ಬ್ಯಾರಿಕೇಡ್ ಹಾಕಿ ಸ್ಯಾನಿಟೈಜರ್ ಮಾಡಿಸಲಾಗಿದೆ. ಜಿಂದಾಲ್ ನಂಜು ದಿನ ದಿನಕ್ಕೆ ಸುತ್ತಮುತ್ತ ಗ್ರಾಮದ ಜನರಿಗೆ ಕಂಡು ಬರುತಿದ್ದು, ಸಾರ್ವಜನಿಕರಲ್ಲಿ ಆತಂಕದ ಮನೆ ಮಾಡಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap