ಆಶಾ ಕಾರ್ಯಕರ್ತರಿಂದ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ.

ಸಿರಿನಾಡ ಸುದ್ದಿ, ಸಿರುಗುಪ್ಪ: ನಗರದಲ್ಲಿ ಆಶಾ ಕಾರ್ಯಕರ್ತರು ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆರೋಗ್ಯಸಚಿವ ಶ್ರೀರಾಮುಲುರವರಿಗೆ ಗ್ರೇಡ್ 2 ತಹಸೀಲ್ದಾರ್ ವಿಶ್ವನಾಥರ ಮೂಲಕ ಮನವಿಸಲ್ಲಿದರು. ನಂತರ ಮಾತನಾಡಿದ ಆಶಾ ಕಾರ್ಯಕರ್ತೆ ತುಳುಸಿ, ನಿತ್ಯವೂ ಕರೋನಾ ರೋಗದ ಭೀತಿಯ ನಡುವೆಯೂ ಮನೆ ಮನೆಗೆ ತೆರಳಿ ಸರ್ವೆ ಮಾಡುವ ಮೂಲಕ ರೋಗ ಹರಡದಂತೆ ಕಾರ್ಯನಿರ್ವಹಿಸುವ ನಮಗೆ ಕೇವಲ 4000ರೂ.ಗೌರವ ಧನ ನೀಡುತ್ತಿರುವುದು ಎಷ್ಠರ ಮಟ್ಟಿಗೆ ಸರಿ. ಕಾರಣ ಗೌರವ ಧನ ಹೆಚ್ಚಳ ಹಾಗೂ ಕೋವಿಡ್ ಕರ್ತವ್ಯದ ವೇಳೆ ಅಗತ್ಯ ರಕ್ಷಣಾತ್ಮಾಕ ಸಾಮಾಗ್ರಿಗಳನ್ನು ನೀಡುವಂತೆ ಒತ್ತಾಯಿಸಿದರು.
ಈ ವೇಳೆ ಉಮಾದೇವಿ ಸೇರಿದಂತೆ ಇತರರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap