ಅಮರದೀಪ ಅಂಗಡಿಯಲ್ಲಿ ಕೆಲಸ ಮಾಡುವ ಮೂವರಿಗೆ ಕೊರೋನಾ ಪಾಸಿಟಿವ್


ಸಿರಿನಾಡ ಸುದ್ದಿ, ಸಿಂಧನೂರು: ಸಿಂಧನೂರು ರಾಯಚೂರು ರಸ್ತೆಯಲ್ಲಿ ಇರುವ ಅಮರದೀಪ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಮೂವರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
20-6-2020 ರಿಂದ 26-06-2020ರವರೆಗೆ ಸಿಂಧನೂರು ನಗರ ವ್ಯಾಪ್ತಿಯ ಅಮರದೀಪ ಅಂಗಡಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಮಹಿಳೆಯೊಬ್ಬರಿಗೆ ಕೊರೋನಾ ಪಾಸಿಟವ್ ಪತ್ತೆಯಾಗಿತ್ತು. ಬಳಿಕ ಅಂಗಡಿಯನ್ನು ಸೀಲ್‌ಡೌನ್ ಮಾಡಲಾಗಿತ್ತು. ಆದರೆ ಅಂಗಡಿಯಲ್ಲಿ ಇದ್ದವರಿಗೆ ಗಂಟಲು ದ್ರವದ ಪರೀಕ್ಷೆ ಮಾಡಿದ ಬಳಿಕ ಕೊರೋನಾ ಇರುವುದು ದೃಡವಾಗಿದೆ. ಹೀಗಾಗಿ ಅಂಗಡಿಗೆ ಭೇಟಿ ನೀಡಿದ ಜನತೆ ಕೋವಿಡ್-19 ಕುರಿತು ಸ್ವಾಬ್ ಪರೀಕ್ಷೆ ಮಾಡಿಕೊಳ್ಳಬೇಕು. ಭೇಟಿ ನೀಡಿದವರಲ್ಲಿ ಗರ್ಭಿಣಿ ಅಥವಾ ವಯೋವೃದ್ದರು ಇದ್ದರೆ ಕೂಡಲೇ ಮಾಹಿತಿ ನೀಡಬೇಕು ಎಂದು ತಹಸೀಲ್ದಾರ ಮಂಜುನಾಥ ಭೋಗಾವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನರ್ಸ್ಗೆ ಪಾಸಿಟಿವ್:
ಸಿಂಧನೂರಿನ ವೆಂಕಟೇಶ್ವರ ಕಾಲೋನಿಯಲ್ಲಿ ಮಾರ್ಟಿನ್ ತಂದೆ ದೇವಪ್ಪರವರ ಮದುವೆಗೆ 21-6-2020 ರಿಂದ21-6-2020ಕ್ಕೆ ಬಂದಿದ್ದ ಮಸ್ಕಿ ಸ್ಪಾಪ್ ನರ್ಸ್ಗೆ ಅವರಿಗೆ ಕೊರೋನಾ ರೋಗ ಇರುವುದು ದೃಡಪಟ್ಟಿದೆ. ಮದುವೆಗೆ ಬಂದವರು ಸ್ವಯಂಪ್ರೇರಿತವಾಗಿ ತಾಲೂಕ ಆಸ್ಪತ್ರೆಗೆ ಭೇಟಿ ನೀಡಿ ಗಂಟಲು ದ್ರವದ ತಪಾಸಣೆ ಮಾಡಿಕೊಳ್ಳಬೇಕು. ಗರ್ಭಿಣಿ ಅಥವಾ ವಯೋವೃದ್ದರು ಇದ್ದರೆ ಕೂಡಲೇ ಮಾಹಿತಿ ನೀಡಬೇಕು ಎಂದು ತಹಸೀಲ್ದಾರ ಮಂಜುನಾಥ ಭೋಗಾವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap