ಅಗಸ್ಟ್ ತಿಂಗಳಲ್ಲಿ ಬ್ಯಾಂಕ್ ರಜಾದಿನ – ಇಲ್ಲಿದೆ ಮಾಹಿತಿ

ಹೊಸದಿಲ್ಲಿ: ಅಗಸ್ಟ್ ತಿಂಗಳು ಬ್ಯಾಂಕ್ ವ್ಯವಹಾರ ನಡೆಸುವಾಗ ಎಚ್ಚರವಿರಲಿ. ಶ್ರಾವಣ ಮಾಸ ಆದ ಕಾರಣ ಸಾಲು ಸಾಲು ಹಬ್ಬ ಮತ್ತು ರಜಾದಿನಗಳು ಬರುವ ಕಾರಣ ನಿಮ್ಮ ಬ್ಯಾಂಕ್ ವ್ಯವಹಾರವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ :
ಆಗಸ್ಟ್ 1 ರಂದು, ಬಕ್ರೀದ್ ಪ್ರಯುಕ್ತ ಬ್ಯಾಂಕುಗಳು ಕಾರ್ಯ ನಿರ್ವಹಿಸುವುದಿಲ್ಲ. ಆಗಸ್ಟ್ 2 ಭಾನುವಾರವಾಗಿದ್ದು ವಾರದ ರಜಾದಿನ.
ಆಗಸ್ಟ್ 3 ರಂದು ರಕ್ಷಾಬಂಧನದ ಕಾರಣ, ದೇಶದ ಕೆಲವು ಭಾಗಗಳಲ್ಲಿ ಬ್ಯಾಂಕುಗಳಲ್ಲಿ ಯಾವುದೇ ಕೆಲಸ ಇರುವುದಿಲ್ಲ. ಅಂದರೆ, ತಿಂಗಳ ಮೊದಲ ಮೂರು ದಿನಗಳವರೆಗೆ ಬ್ಯಾಂಕುಗಳು ಕಾರ್ಯ ನಿರ್ವಹಿಸುವುದಿಲ್ಲ.
ಆಗಸ್ಟ್ 8 ರಂದು, ತಿಂಗಳ ಎರಡನೇ ಶನಿವಾರ. ಈ ದಿನ ಬ್ಯಾಂಕುಗಳಿಗೆ ಸಾಪ್ತಾಹಿಕ ರಜಾದಿನವಾಗಿದೆ.
ಆಗಸ್ಟ್ 9 ರ ಭಾನುವಾರ ಎಂದಿನಂತೆ ವಾರದ ರಜಾದಿನ.
ಆಗಸ್ಟ್ 11 ಮತ್ತು 12 ರಂದು ದೇಶದ ವಿವಿಧ ಭಾಗಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವಿದೆ. ಈ ಸಂದರ್ಭದಲ್ಲಿ ಬ್ಯಾಂಕುಗಳಲ್ಲಿ ರಜೆ ಇರುತ್ತದೆ.
ಆಗಸ್ಟ್ 13 ರಂದು ಬ್ಯಾಂಕುಗಳು ದೇಶಪ್ರೇಮಿ ದಿನಾಚರಣೆಯ ಅಂಗವಾಗಿ ಮುಚ್ಚಲ್ಪಡುತ್ತವೆ.
ಆಗಸ್ಟ್ 15 ಸ್ವಾತಂತ್ರ್ಯ ದಿನ. ಇದು ರಾಷ್ಟ್ರೀಯ ರಜಾದಿನವಾಗಿದೆ.
ಆಗಸ್ಟ್ 16 ಭಾನುವಾರವಾದ ಕಾರಣ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.
ಆಗಸ್ಟ್ 15 ಮತ್ತು 16 ರಂದು ಬ್ಯಾಂಕುಗಳು ಸತತ ಎರಡು ದಿನಗಳವರೆಗೆ ಮುಚ್ಚಲ್ಪಡುತ್ತವೆ.
ಆಗಸ್ಟ್ 20 ರಂದು ಮತ್ತು ಆಗಸ್ಟ್ 21 ರಂದು ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಆಗಸ್ಟ್ 22 ರಂದು ಗಣೇಶ ಚತುರ್ಥಿಯಿಂದಾಗಿ ದೇಶದ ಬಹುತೇಕ ಭಾಗಗಳಲ್ಲಿ ಬ್ಯಾಂಕುಗಳು ಕಾರ್ಯ ನಿರ್ವಹಿಸುವುದಿಲ್ಲ.
ಆಗಸ್ಟ್ 23 ಭಾನುವಾರ ವಾರದ ರಜಾದಿನ ಅಷ್ಟೇ ಅಲ್ಲ,
ಆಗಸ್ಟ್ 29 ತಿಂಗಳ ನಾಲ್ಕನೇ ಶನಿವಾರವಾಗಿದ್ದು, ಇದು ಬ್ಯಾಂಕುಗಳಿಗೆ ಸಾಪ್ತಾಹಿಕ ರಜೆಯಾಗಿದೆ.
ಆಗಸ್ಟ್ 30 ರಂದು ಭಾನುವಾರದ ಕಾರಣ ಬ್ಯಾಂಕುಗಳು ಕಾರ್ಯ ನಿರ್ವಹಿಸುವುದಿಲ್ಲ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap