ಅಂಜಾನಾದ್ರಿ ಬೆಟ್ಟದ ಶಿಲೆ ರಾಮ ಮಂದಿರಕ್ಕೆ. ರಾಮಮಂದಿರ ನಿರ್ಮಾಣ ಹಿಂದೂಗಳ ಪವಿತ್ರ ದಿನಕ್ಕೆ ಕ್ಷಣಗಣನೆ.

ಸಿರಿನಾಡ ಸುದ್ದಿ, ಕೊಟ್ಟೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಗುವ ದಿನ ಪ್ರತೀ ಭಾರತೀಯನಿಗೆ ಅತ್ಯಂತ ಪವಿತ್ರ ದಿನವಾಗಲಿದೆ ಎಂದು ಕರ್ನಾಟಕ ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಕ್ ಅಭಿಪ್ರಾಯಪಟ್ಟರು.
ತಾಲೂಕಿನ ಉಜ್ಜಿನಿಯ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಅಂಜಾನಾದ್ರಿ ಬೆಟ್ಟದ ಕಲ್ಲಿಗೆ, ಮೃತ್ತಿಕೆಗೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 500 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಶ್ರೀ ರಾಮ ಮಂದಿರ ನಿಮಾರ್ಣ ಮಾಡುವ ಕಾರ್ಯದ ಕುರಿತು, ಎಲ್ಲ ಮೂಲಗಳ ಮಾಹಿತಿಗಳನ್ನು ಸಂಗ್ರಹಿಸಿ, ಪರಿಶೀಲಿಸಿದ ಸುಪ್ರಿಂ ಕೋರ್ಟ್ ಪಂಚ ಪೀಠದ ನ್ಯಾಯಧೀಶರು ನೀಡಿರುವ ತೀರ್ಪು ಭಾರತ ದೇಶದ ಎಲ್ಲ ಹಿಂದೂ ಧರ್ಮದ ಪ್ರಜೆಗಳಿಗೆ ಮಹತ್ತರವಾಗಿದೆ. ಪ್ರಧಾನ ಮಂತ್ರಿಗಳಿAದ ನೆರವೇರುವ ಮಂದಿರ ಅಡಿಗಲ್ಲು ಸ್ಥಾಪನೆಗೆ ಕಿಷ್ಕಿಂಧೆಯ ಆಂಜನಾದ್ರಿ ಬೆಟ್ಟದಿಂದ ಬೆಳ್ಳಿ ಲೇಪಿತ ಶಿಲೆ, ಮೃತ್ತಕೆ ಹಾಗೂ ಜಲವನ್ನು ಸಮರ್ಪಣೆ ಮಾಡುತ್ತಿರುವುದರ ಮೂಲಕ ರಾಜ್ಯ ಹೆಸರು ಇತಿಹಾಸ ಪುಟಕ್ಕೆ ಸೇರುತ್ತಿರುವುದು ನಮ್ಮೆಲ್ಲರ ಹೆಮ್ಮಯಾಗಿದೆ ಎಂದರು.
ಹಿಂದೂ ಧರ್ಮದ ಜನತೆಯ ರಾಮ ಮಂದಿರ ಪವಿತ್ರ ಕಾರ್ಯಕ್ಕೆ ಉಜ್ಜಯಿನಿಯ ಸದ್ಧರ್ಮ ಪೀಠದಿಂದ ಶಿಲೆ, ಮೃತ್ತಿಕೆ ಪೂಜೆ ನೆರೆವೆರಿಸಿಕೊಂಡು ಅಯೋಧ್ಯಗೆ ಹೋಗುತ್ತಿರುವದು ವಿಜಯ ನಗರ ಸಾಮ್ರಾಜ್ಯದ ವೈಭವವನ್ನು ಇನ್ನಷ್ಟು ಉತುಂಗಕ್ಕೆ ತಲುಪಿಸಿದೆ ಎಂದು ಹೇಳಿದರು.
ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, 40 ಕೆ.ಜಿ ಬೆಳ್ಳಿ ಲೇಪಿತ ಇಟ್ಟಿಗೆಗಳಿಂದ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಮನವಮಿಯಂದು ಚಾಲನೆ ನೀಡುತ್ತಿರುವುದು ಸಂತಸದ ಸಂಗತಿ ಎಂದರು.
ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಪ್ರಾಸ್ತವಿಕ ಮಾತನಾಡಿದರು.
ಶ್ರೀ ಪೀಠದ .ಮಲ್ಲಯ್ಯ ಶಾಸ್ತಿç ವೇದಘೋಷ ಮಾಡಿದರು. ಷ.ಬ್ರ. ಶ್ರೀ ಮಳೆಯೋಗೀಶ್ವರ ಶಿವಾಚಾರ್ಯರು, ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಸಂಜೀವ ಮರಡಿ, ಕೂಡ್ಲಿಗಿ ತಾಲೂಕು ಅಧ್ಯಕ್ಷ ದುರುಗೇಶ, ನಿವೃತ್ತ ಶಿಕ್ಷಕ ಎ.ಎಂ.ಚನ್ನವೀರಸ್ವಾಮಿ, ನಟರಾಜ್, ವಕೀಲ ಮರುಳಸಿದ್ದಪ್ಪ ಇತರರಿದ್ದರು. ಕಾರ್ಯಕ್ರಮದಲ್ಲಿ ಅಂಜನಾದ್ರಿ ಬೆಟ್ಟದಿಂದ ತಂದಿದ್ದ ಬೆಳ್ಳಿ ಲೇಪಿತ ಶಿಲೆಗೆ, ಮೃತ್ತಿಕೆಗೆ ಜಗದ್ಗುರುಗಳಿಂದ ವಿಶೇಷವಾಗಿ ಪೂಜೆ ನೆರವೇರಿಸಲಾಯಿತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap